Surprise Me!

ಅಂದು ಹಾಲು ಮುಚ್ಚಿಟ್ಟರು, ಇಂದು ಚಾಕಲೇಟ್ ಕದ್ದು ತಿಂದರು | Filmibeat Kannada

2017-11-16 1 Dailymotion

ಅಂದು ಹಾಲು ಮುಚ್ಚಿಟ್ಟರು, ಇಂದು ಚಾಕಲೇಟ್ ಕದ್ದು ತಿಂದರು: ಅನುಪಮಾ ಏನಿದೆಲ್ಲಾ.?ಎದುರಿಗೆ ಇರುವವರನ್ನ ಯಾಮಾರಿಸಬಹುದು. ಆದ್ರೆ, ಮನೆಯ ಮೂಲೆ ಮೂಲೆಯಲ್ಲೂ ಇರುವ ಕ್ಯಾಮರಾ ಕಣ್ಣುಗಳನ್ನ ಯಾಮಾರಿಸಲು ಸಾಧ್ಯವೇ.? ಮನುಷ್ಯ ಕಣ್ಣು ಮಿಟುಕಿಸಬಹುದು. ಆದ್ರೆ, 24*7 ಕಣ್ಣು ಮಿಟುಕಿಸದೇ ಸದಾ ಸ್ಪರ್ಧಿಗಳ ಚಲನ ವಲನಗಳನ್ನು ಗಮನಿಸುವ 'ಬಿಗ್ ಬಾಸ್'ಗೆ ಚಳ್ಳೆಹಣ್ಣು ತಿನ್ನಿಸಲು ಆಗುತ್ತದೆಯೇ.? <br />ಇದೆಲ್ಲ ಸಾಧ್ಯ ಇಲ್ಲ ಅಂತ ಗೊತ್ತಿದ್ದರೂ, 'ಬಿಗ್ ಬಾಸ್' ನೀಡಿದ್ದ ಆದೇಶ ಮೀರಿ ನಟಿ ಅನುಪಮಾ ಗೌಡ, ಇನ್ನೊಬ್ಬರಿಗೆ ಸೇರಿದ್ದ ಚಾಕಲೇಟ್ ನ ಕದ್ದು ತಿಂದಿದ್ದಾರೆ. ಸಾಲದಕ್ಕೆ, ಸಿಹಿ ಕಹಿ ಚಂದ್ರು ಹಾಗೂ ಆಶಿತಾಗೂ ತಿನ್ನಿಸಿದ್ದಾರೆ.ಒಮ್ಮೆ ಹಾಲಿನ ಪ್ಯಾಕೆಟ್ ಗಳನ್ನು ಮುಚ್ಚಿಟ್ಟು, ಸಮೀರಾಚಾರ್ಯ ಅವರಿಗೆ ಒಂದು ಲೋಟ ಹಾಲು ಕೊಡದೆ ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿದ್ದ ಅನುಪಮಾ ಗೌಡ ಇದೀಗ ಚಾಕಲೇಟ್ ನ ಕದ್ದು ತಿಂದು 'ಬಿಗ್ ಬಾಸ್' ನಿಂದ ಶಿಕ್ಷೆಗೆ ಒಳಗಾಗಿದ್ದಾರೆ. ಮುಂದೆ ಓದಿರಿ,ಮಧ್ಯಾಹ್ನ ಊಟ ಮಾಡಿದ ಸ್ವಲ್ಪ ಹೊತ್ತಿನಲ್ಲಿಯೇ, ನಟಿ ಅನುಪಮಾ ಗೌಡಗೆ ಹಸಿವು ಶುರು ಆಗಿದೆ. ''ಉಪ್ಸಾರು ತಿಂದಿದ್ದು, ಹೊಟ್ಟೆಯಲ್ಲಿ ಕರಗಿ ಹೋಯ್ತು ಅನ್ಸುತ್ತೆ'' ಎನ್ನುತ್ತಾ ಅಡುಗೆ ಮನೆಯಲ್ಲಿದ್ದ ಫ್ರಿಡ್ಜ್ ತೆಗೆದು ನೋಡಿದ ಅನುಪಮಾ ಗೌಡಗೆ ಚಾಕಲೇಟ್ ಕಾಣಿಸಿದೆ.ಫ್ರಿಡ್ಜ್ ನಲ್ಲಿದ್ದ ಚಾಕಲೇಟ್ ನ ತೆಗೆಯಲು ಅನುಪಮಾ ಗೌಡಗೆ ಆಗಲಿಲ್ಲ. ಹೀಗಾಗಿ, ಅಲ್ಲೇ ಪಕ್ಕದಲ್ಲಿ ಇದ್ದ ಸಿಹಿ ಕಹಿ ಚಂದ್ರು ರನ್ನ ಅನುಪಮಾ ಗೌಡ ಸನ್ನೆ ಮಾಡಿ ಕರೆದರು.

Buy Now on CodeCanyon